ಅಭಿಪ್ರಾಯ / ಸಲಹೆಗಳು

ನೀವು ಕಣ್ಗಾವಲಿನಲ್ಲಿದ್ದೀರಿ

ನೀವು ಕಣ್ಗಾವಲಿನಲ್ಲಿದ್ದೀರಿ

ಅಪರಾಧಿಗಳ ಪತ್ತೆಗೆ ಕ್ಯಾಮರಾ ಮತ್ತು ಬ್ಲಾಕ್ಬೆರ್ರಿಗಳ ಬಳಕೆ

       ರಸ್ತೆ ಗಳಲ್ಲಿನ ಅಪಘಾತಗಳನನ್ನು ತಡೆಗಟ್ಟಲು ಬೆಂಗಳೂರು ಜಿಲ್ಲಾ ಪೊಲೀಸರಿಗೆ ನೂತನ ತಂತ್ರಜ್ಞಾನ ಆಧಾರಿತ ವ್ಯವಸ್ಥೆಯನ್ನು ಒದಗಿಸಲಾಗಿದೆ, ಈ ಮೂಲಕ ಕಾನೂನು ಉಲ್ಲಂಘನೆ , ಅತಿವೇಗ , ಕೆಂಪು ಬೆಳಕು ದಾಟುವುದು, ಕುಡಿದು ವಾಹನ ಚಾಲನೆ, ವಾಹನಗಳ ಮಾಲೀಕತ್ವಕ್ಕೆ ಸಂಬಂಧಿಸಿದ ವಿಷಯ ಹಾಗು ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿ ದಂಡಗಳನ್ನು ವಿಧಿಸಲಾಗುವುದು .

1.ಕುಡಿದು ವಾಹನ ಚಾಲನೆ ಅಥವ ಅತಿವೇಗದ ಚಲನೆ ಮಾಡಿದಲ್ಲಿ

        ಕುಡಿದು ಚಾಲನೆ ಮಾಡುತಿರುವ ಬಗ್ಗೆ ಅನುಮಾನ ಬಂದಲ್ಲಿ ಅಂತವರನ್ನು ಬೆಂಗಳೂರು ಜಿಲ್ಲಾ ಪೊಲಿಸರು ತಡೆದು ತೀವ್ರತರದ ಪರೀಕ್ಷೆಗೆ ಒಳಪಡಿಸುವರು,ಪಲಿತಾಂಶ ಧನಾತ್ಮಕವಾಗಿದ್ದಲ್ಲಿ ಸ್ಥಳದಲ್ಲಿಯೆ ವಾಹನವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು,ವ್ಯಕ್ತಿಯು ನ್ಯಾಯಲಯದ ಮುಂದೆ ದಂಡವನ್ನು ಪಾವತಿಸಿ ವಾಹನವನ್ನು ಬಿಡಿಸಿಕೊಳ್ಳತಕ್ಕದ್ದು. ಅಷ್ಟೇಯಲ್ಲಧೆ ಈ ಅಪರಾದವು ಎನ್ಫೋರ್ಸ್ಮೆಂಟ್ ಆಟೊಮೇಷನ್ ಸೆಂಟರ್ ನಲ್ಲಿ ದಾಖಲಾಗುವುದು ಫೊಲೀಸ್ ನಿರೀಕ್ಷಕರು ಯಾವ ಸಮಯದಲ್ಲಾದರು ಇದರಲ್ಲಿನ ವಿವರಗಳನ್ನು ಪಡೆದುಕೊಳ್ಳಬಹುದು. ಕುಡಿದು ಚಾಲನೆ ಮಾಡುವುದು ತುಂಬ ಗಂಬೀರ ಅಪರಾದವಾಗಿದ್ದು ಈ ಪ್ರಕರಣದಲ್ಲಿ ಚಾಲಕನಿಗೆ ಸೆರೆವಾಸ ಸಹ ವಿಧಿಸಲುಬಹುದು.ನಿಗದಿತ ಮಿತಿಗಿಂತ ವೇಗವಾಗಿ ಚಾಲನೆ ಪ್ರಕರಣಗಳಿಗೂ ಈ ಮೇಲಿನ ದಂಡನೆಗಳನ್ನು ವಿಧಿಸಬಹುದು.ವ್ಯಕ್ತಿಯು ಈ ಪ್ರಕರಣಗಳಲ್ಲಿ ರೂಡಿಯ ಅಪರಾದಿ ಎಂದು ಕಂಡುಬಂದಲ್ಲಿ ಕೇವಲ ದಂಡವನ್ನು ಹೆಚ್ಚಿಸುವುದಷ್ಟೆ ಅಲ್ಲದೆ ಚಾಲನ ಪರವಾನಿಗೆಯನ್ನು ರದ್ದುಗೊಳಿಸಲೂಬಹುದು.

2.ನೀವು ನಿಮ್ಮವಾಹನದ ಮಾಲೀಕತ್ವವನ್ನು ವರ್ಗಾಯಿಸದಿದ್ದಲ್ಲಿ

         ನೀವು ಬೇರೆಯವರಿಗೆ ನಿಮ್ಮ ವಾಹನವನ್ನು ಮಾರಿದಲ್ಲಿ ಅಥವಾ ಕೊಂಡುಕೊಂಡು ಮಾಲೀಕತ್ವವನ್ನು ವರ್ಗಾಯಿಸದಿದ್ದಲ್ಲಿ ಅದು ಕಾನೂನಿನ ಪ್ರಕಾರ ಅಕ್ರಮವಾದದ್ದು. ನೀವು ಮಾರಾಟ ಮಾಡಿದ ವಾಹನವು ಅಪಘಾತ ,ಭಯೋತ್ಪಾದನಾ ಚಟುವಟಿಕೆಗಳಲ್ಲಿ ಹಾಗು ಇನ್ನಿತರ ಭಾಗಿಯಾಗಿದ್ದು,ನೀವು ಸರಿಯಾದ ಸಮಯಕ್ಕೆ ಮಾಲೀಕತ್ವವನ್ನು ವರ್ಗಾಯಿಸದೆಯಿರುವುದು ಕಂಡುಬಂದಲ್ಲಿ ಈ ಪ್ರಕರಣಗಳಲ್ಲಿ ನಿಮ್ಮನ್ನು ಒಬ್ಬ ಆರೋಪಿಯಾಗಿಸಲಾಗುವುದು .ನೀವು ಮಾರಾಟ ಮಾಡಿದ /ಕೊಂಡುಕೊಂಡ 45 ದಿನದ ಒಳಗಾಗಿ ಸಂಬಂಧ ಪಟ್ಟ ಪ್ರ್ರಾದಿಕಾರಕ್ಕೆ ಮಾಹಿತಿ ಒದಗಿಸಿ ಮಾಲೀಕತ್ವವನ್ನು ವರ್ಗಾಯಿಸಿ ಅಗತ್ಯ ದಾಖಲಾತಿ ಪಡೆದು ಕೊಳ್ಳುವುದು ಮಾರಾಟಗಾರ ಹಾಗು ಖರೀದಿದಾರರಿಬ್ಬರ ಜವಾಬ್ದಾರಿಯಾಗಿರುತ್ತದೆ.

ಇತ್ತೀಚಿನ ನವೀಕರಣ​ : 27-10-2020 04:16 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಬೆಂಗಳೂರು ಗ್ರಾಮಾಂತರ ಜಿಲ್ಲೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080