ಅಭಿಪ್ರಾಯ / ಸಲಹೆಗಳು

ಸಂಚಾರಿ ನಿಯಮಗಳು

ಸಂಚಾರಿ ನಿಯಮಗಳು

  1. ವಾಹನ ಚಲಾಯಿಸಲು ಕಲಿಯಲು ಇಚ್ಛಿಸುವವರು ಮೊದಲು ಎಲ್‍ಎಲ್‍ಆರ್ ಹೊಂದಿರಬೇಕು.
  2. ಕಾನೂನಿನ ಪ್ರಕಾರ ವಾಹನದ ಮುಂಬದಿಯಲ್ಲಿ ಮತ್ತು ಹಿಂಬದಿಯಲ್ಲಿ ಬಿಳಿ ಹಲಗೆಯ ಮೇಲೆ ಕಾಣಿಸುವ ರೀತಿಯಲ್ಲಿ 7″ * 7″ (17 c.m  *  17 c.m)  L ಎಂದು ಕೆಂಪು ಬಣ್ಣದ ಅಕ್ಷರದಲ್ಲಿ 4 ಸೆ.ಮೀ ಎತ್ತರದ ಮತ್ತು 3.5 ಅಗಲದಲ್ಲಿ ನಮೂದಿಸಿರಬೇಕು.
  3. ಯಾವಾಗಲೂ DL ಅನ್ನು ವಾಹನ ಚಲಾಯಿಸುವಾಗ ಬಳಿ ಇಟ್ಟುಕೊಂಡರಬೇಕು.
  4. ಈ ಪರವಾನಿಗೆ ಪತ್ರ ಕೇವಲ 6 ತಿಂಗಳು ಮಾತ್ರ ಚಲಾವಣೆಯಲ್ಲಿರುತ್ತದೆ.
  5. ಈ ಪತ್ರವು ಕೇವಲ ಒಂದೇ ರಾಜ್ಯಕ್ಕೆ ಮೀಸಲಾಗಿರುತ್ತದೆ.
  6. ಈ ಪರವಾನಿಗೆ ಪತ್ರಕ್ಕೆ ಪಡೆಯಲು 18 ವರ್ಷ ಕಡ್ಡಾಯವಾಗಿ ಆಗಿರಬೇಕು.

 

ಕಾರು ಚಲಾವಣೆಗೆ ಕಲಿಕಾ ಪರವಾನಿಗೆ ಪತ್ರ:

ಕಾರು ಚಲಾಯಿಸಲು ಕಲಿಯುವಾಗ ಕಲಿಸುವ ವ್ಯಕ್ತಿ ಕಡ್ಡಾಯವಾಗಿ ವಾಹನ ಚಲಾವಣೆ ಪ್ರಮಾಣ ಪತ್ರ ಹೊಂದಿರಬೇಕು.

 

ವಾಹನ ಚಾಲನಾ ಪ್ರಮಾಣ ಪತ್ರ :

 

  1. ವಾಹನದ ಗಾತ್ರದ ಮೇಲೆ (ಲಘು & ಬಾರಿ) ಚಾಲನಾ ಪರವಾನಗಿ ಪತ್ರ ನೀಡಲಾಗುವುದು.
  2. ನಿರ್ಧಿಷ್ಟ ಕಾಲಾವಧಿ ಮುಗಿದ ಮೇಲೆ ಮತ್ತೆ ನವೀಕರಿಸಬೇಕಿರುತ್ತದೆ.
  3. ಚಾಲನಾ ಪರವಾನಗಿ ಪತ್ರ ಪಡೆಯಲು ಕಡ್ಡಾಯವಾಗಿ 18 ವರ್ಷ ಆಗಿರಲೇಬೇಕು.
  4. ಚಾಲಕನಾಗಿ ವೃತ್ತಿ ನಿರ್ವಹಿಸುವವನಾಗಿದ್ದರೆ ಕನಿಷ್ಟ 20 ವರ್ಷ ಆಗಿರಲೇಬೇಕು.
  5. ನಿರ್ಧಿಷ್ಟ ವಾಹನ ಚಲಾಯಿಸಲು ಪ್ರಮಾಣ ಪತ್ರವು ನಮ್ಮ ದೇಶದಲ್ಲಿ ಎಲ್ಲೆಡೆ ಮಾನ್ಯ ಆಗಿರುತ್ತದೆ.

 

ವಾಹನ ಚಲಾಯಿಸುವಾಗ ಗಮನದಲ್ಲಿರಬೇಕಾದ ಅಂಶಗಳು :

 

  1. ವಾಹನ ಕಡ್ಡಾಯವಾಗಿ ನೊಂದಣಿಯಾಗಿರಬೇಕು.
  2. ನೊಂದಣಿ ಸಂಖ್ಯೆ ನಿಚ್ಚಳವಾಗಿ ನಿಖರವಾಗಿ ಕಾಣುವಂತಿರಬೇಕು.
  3. ವಾಹನ ವಿಮಾ ಹೊಂದಿರಬೇಕು.
  4. ರಸ್ತೆಯಲ್ಲಿ ಚಲಾಯಿಸುವ ಸುಸ್ಥಿತಿಯಲ್ಲಿ ವಾಹನ ಇರಬೇಕು.  ಇಲ್ಲದಾದಲ್ಲಿ ನಮ್ಮ ಪ್ರಾಣ ಮತ್ತು ಇತರರ ಪ್ರಾಣಕ್ಕೆ ಕುತ್ತು ತಂದಿತು.
  5. ಪಾನಮತ್ತರಾಗಿ ವಾಹನ ಚಲಾಯಿಸಬಾರದು.
  6. ವಾಹನ ಚಲಾವಣೆ ಪರವಾನಿಗೆ ಪತ್ರದಲ್ಲಿ ನಮೂದಿಸಿದ ಗಾಡಿಯನ್ನು ಮಾತ್ರ ನೀವು ಚಲಾಯಿಸಲು ಅರ್ಹರಿರುತ್ತೀರಿ.
  7. ಮಾನಸಿಕವಾಗಿ ಮತ್ತು ದೈಹಿಕವಾಗಿ ವಾಹನ ಚಲಾಯಿಸಲು ಅರ್ಹರಿರಬೇಕು.

 

ಚಲಾಯಿಸುವ ಕಾರು ಈ ಕೆಳಕಂಡ ಅಂಶಗಳನ್ನು ಹೊಂದಿರಬೇಕು.

 

  1. ನೊಂದಣಿಯಾಗಿರಬೇಕು.
  2. ನಂಬರ್ ಪ್ಲೇಟ್, ಹೆಡ್‍ಲೈಟ್ ಮುಂತಾದವುಗಳನ್ನು ಹೊಂದಿರಬೇಕು.
  3. ಸೂರ್ಯಾಸ್ತದ 1 ಗಂಟೆಯ ನಂತರ ಸೂರ್ಯೋದಯದ 1 ಗಂಟೆ ಮುಂಚಿತವಾಗಿ ವಾಹನದ ಲೈಟ್‍ಗಳನ್ನು ಹಾಕಿಕೊಂಡು ಚಲಾಯಿಸಬೇಕು.
  4. ಬ್ರೇಕ್‍ಗಳು ಸಧೃಢವಾಗಿರಬೇಕು.
  5. ವಾಹನದ ಟೈರ್‍ಗಳು ಒಳ್ಳೆಯ ಸ್ಥಿತಿಯಲ್ಲಿರಬೇಕು.
  6. ವಾಹನದ ಗಂಟೆ ಸರಿಯಾಗಿ ಕೆಲಸ ಮಾಡುತ್ತಿರಬೇಕು.
  7. ಸ್ಟಿಯರಿಂಗ್ ಸರಿಯಾಗಿ ಕೆಲಸ ನಿರ್ವಹಿಸಬೇಕು.

ಟ್ರಾಫಿಕ್ ಪೊಲೀಸ್‍ನವರು ನಿಮ್ಮ ವಾಹನ ಮತ್ತು ನಿಮ್ಮ ಚಲಾವಣೆ ಪತ್ರದ ದಾಖಲಾತಿಗಳನ್ನು ಪರಿಶೀಲಿಸಬಹುದು ಮತ್ತು ನಿಮಗೆ ವಾಹನ ಚಲಾವಣೆಯ ಕುರಿತು ಸೂಕ್ತ ನಿರ್ದೇಶನಗಳನ್ನು ನೀಡಬಹುದು. ಈ ಆದೇಶಗಳನ್ನು ಪಾಲಿಸುವುದು ಮುಖ್ಯವಾಗಿರುತ್ತದೆ. ಸಿಗ್ನಲ್ ಬಳಿ ಟ್ರಾಫಿಕ್ ಪೊಲೀಸ್‍ನವರ ನಿರ್ಧಾರವೇ ಅಂತಿಮವಾಗಿರುತ್ತದೆ. ನೀವು ನಿಮ್ಮ ವಾಹನವನ್ನು ಸರಿಯಾದ ಸ್ಥಳದಲ್ಲಿ ನಿಲ್ಲಿಸಿರದಿದ್ದರೆ ನಿಮ್ಮ ವಾಹನವನ್ನು ಟ್ರಾಫಿಕ್ ಪೊಲೀಸರು ಎತ್ತಿಕೊಂಡು ಹೋಗುವುದು ಸಾಮಾನ್ಯ. ಸುತ್ತಮುತ್ತಲಿನವರನ್ನು ಕೇಳಿ ನಂತರ ಟ್ರಾಫಿಕ್ ಪೊಲೀಸನವರನ್ನು ಸಂಪರ್ಕಿಸಿ ಇಲ್ಲವಾದಲ್ಲಿ ವಾಹನ ಕಳುವಾದ ಬಗ್ಗೆ ದೂರು ನೀಡಿ.

 

ಪೊಲೀಸ್ ತೆಗೆದುಕೊಳ್ಳಬಹುದಾದ ಕ್ರಮಗಳು:

 

ನಿಮ್ಮ ಪರವಾನಗೆ ಪತ್ರದಲ್ಲಿರುವಂತೆ ಮಾಹಿತಿಗಳನ್ನು ಪಡೆದು ಅವುಗಳನ್ನು ಕೋರ್ಟ್‍ಗೆ ಹಾಜರುಪಡಿಸಬಹುದು. ಕೋರ್ಟ್ ಈ ಕುರಿತು ಮುಂದಿನ ಕ್ರಮದಂತೆ ದಂಡ ವಿಧಿಸಬಹುದು. ಆ ದಂಡವನ್ನು ಸರಿಯಾದ ಸಮಯದಲ್ಲಿ ಕೋರ್ಟ್‍ಗೆ ಪಾವತಿಸತಕ್ಕದ್ದು. ಇಲ್ಲವಾದಲ್ಲಿ ಕೋರ್ಟ್‍ನಿಂದ ಸಮನ್ಸ್ ಜಾರಿಯಾಗುವುದು. ವಾಹನ ಚಾಲನಾ ಪರವಾನಗಿ ಪತ್ರ ರದ್ದುಗೊಳಿಸಬಹುದು ಅಥವಾ ಜಪ್ತಿ ಮಾಡಬಹುದು. ಸೂಕ್ತ ದಂಡವನ್ನು ಪಾವತಿಸಿ ಸೂಕ್ತ ರಸೀದಿ ಪಡೆಯಿರಿ.

 

ಕೆಲವು ಪ್ರಮುಖ ಅಪರಾಧಗಳು:

  1. ವಾಹನ ಚಲಾಹಿಸುವಾಗ ವಾಹನ ಚಾಲನಾ ಪರವಾನಗಿ ಪತ್ರ ಹೊಂದಿರಬೇಕು.
  2. ಪರವಾನಗಿ ಇಲ್ಲದಿರುವವರಿಗೆ ವಾಹನ ಚಲಾಯಿಸಲು ಅವಕಾಶ ನೀಡಬಾರದು.
  3. ವಿಮೆ ಮಾಡಿಸದ ವಾಹನಗಳನ್ನು ಚಲಾಯಿಸಬಾರದು.
  4. ವೇಗ ನಿಯಂತ್ರಣ ಮುಖ್ಯ
  5. ಮದ್ಯಪಾನ ಮಾಡಿ ವಾಹನ ಚಲಾಯಿಸಬಾರದು.
  6. ಲೇನ್ ಕಟ್ಟಿಂಗ್ ಮಾಡದಿರಿ.
  7. ಒನ್ ವೇ ಇದ್ದಾರ ಅವರ ವಿರುದ್ಧ ಚಾಲನೆ ಬೇಡ.
  8. ಸರಿಯಾದ ಹೆಡ್‍ಲೈಟ್ ಬಳಸಿ
  9. ವೈಯಕ್ತಿಕ ವಾಹನಗಳನ್ನು ವ್ಯಾಪಾರದ ಬಳಕೆಗೆ ಬಳಸಬಾರದು.
  10. ಸರಕುಗಳನ್ನು ಸರಿಯಾದ ರೀತಿಯಲ್ಲಿ ತೆಗೆದುಕೊಂಡು ಹೋಗಿ.
  11. ಟ್ಯಾಕ್ಸಿ ಡ್ರೈವರ್ ವಾಹನಗಳನ್ನು ಓಡಿಸಲು ಇಲ್ಲವೆಂದಲ್ಲಿ / ಹೆಚ್ಚಿನ ಹಣವನ್ನು ಕೇಳಿದಾಗ / ಸಮವಸ್ತ್ರ ಧರಿಸದೇ ಇದ್ದಾಗ ದೂರು ನೀಡಬಹುದು.
  12. ಟ್ರಾಫಿಕ್ ಸಿಗ್ನಲ್‍ಗಳನ್ನು ಪಾಲಿಸದೇ ಇದ್ದಾಗ ದೂರು ನೀಡುವುದು.

ಇತ್ತೀಚಿನ ನವೀಕರಣ​ : 27-10-2020 04:17 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಬೆಂಗಳೂರು ಗ್ರಾಮಾಂತರ ಜಿಲ್ಲೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080