ಅಭಿಪ್ರಾಯ / ಸಲಹೆಗಳು

ಮಾಹಿತಿ ಹಕ್ಕು ಕಾಯ್ದೆ

ಮಾಹಿತಿ ಹಕ್ಕು ಅಧಿನಿಯಮ ಸಾರ್ವಜನಿಕ ಅಧಿಕಾರಿ ವ್ಯಾಖ್ಯಾನ:


ಯಾವುದೇ ಅಧಿಕಾರಿ/ಅಧಿಕಾರ ಸರ್ಕಾರದ ಯಾವುದೇ ಭಾಗ ಈ ಕೆಳಕಂಡ ಕಾರಣಗಳಿಂದ ಸ್ಥಾಪಿಸಲ್ಪಟ್ಟಿದೆ.


1)  ಸಂವಿಧಾನದಿಂದ/ ಸಂವಿಧಾನದ ಅಡಿಯಲ್ಲಿ
2) ಸಂಸತ್ತಿನ ಯಾವುದೇ ಕಾನೂನಿನ ಅಡಿಯಲ್ಲಿ
3) ರಾಜ್ಯದ ಶಾಸನಗಳ ಅಡಿಯಲ್ಲಿ
4) ಸರ್ಕಾರದಿಂದ ಯಾವುದೇ ರೀತಿಯ ಅಧಿಸೂಚನೆ ಮೇರೆಗೆ
5) ಸರ್ಕಾರೇತರ ಸಂಸ್ಥೆಗಳು ಸರ್ಕಾರದಿಂದ ನೇರವಾಗಿ ಅಥವಾ ಪರೋಕ್ಷವಾಗಿ ಸರ್ಕಾರದಿಂದ ಹಣ ಸಹಾಯ ಪಡೆದಿದ್ದಲ್ಲಿ


ಮಾಹಿತಿಯ ವ್ಯಾಖ್ಯಾನ:


              ಯಾವುದೇ ಮಾಹಿತಿಯೂ ಕುರಿತಂತೆ ದಾಖಲೆಗಳು, ಕಾಗದ ಪತ್ರಗಳು, ಜ್ಞಾಪನಗಳು,ಇ-ಮೇಲ್ ಗಳು, ಸಲಹೆಗಳು , ಪತ್ರಿಕೆ ಪ್ರಕಟಣೆಗಳು, ಸುತ್ತೋಲೆಗಳು, ಆದೇಶಗಳು, ಲಾ ಪುಸ್ತಕಗಳು, ಕಾಂಟ್ರಾಕ್ಟ್, ವರದಿಗಳು,  ಮಾದರಿಗಳು, ದತ್ತಾಂಶಗಳನ್ನು ಹೊಂದಿದ ಸಾಫ್ಟ್ ಕಾಪಿ ಮಾಹಿತಿ ಇವುಗಳನ್ನು ನಿಗದಿತ ಸಮಯದಲ್ಲಿ ಸಂಬಂದಿತ ಅಧಿಕಾರಿ ಪಡೆದುಕೊಳ್ಳುವವನು ಆಗಿರುತ್ತಾನೆ.
1) ಯಾವುದೇ ದಾಖಲೆ, ಕಡತ ಮತ್ತು ಹಸ್ತ ಪ್ರತಿಗಳು.
2) ಯಾವುದೇ ರೀತಿಯ ಮೈಕ್ರೊಫಿಲ್ಮ್ ಮತ್ತು ಮೈಕ್ರೋ ಚಿತ್ರದ  ಬಿಲ್ಲೆಗಳು ಮತ್ತು ವರದಿಯ ನಕಲುಗಳು.
3) ಮೈಕ್ರೊಫಿಲ್ಮ್  ನ ಯತಾವತ್ತಾದ ನಕಲು ಪ್ರತಿ .
4) ಎಲೆಕ್ಟ್ರಾನಿಕ್‍ ಅಥವಾ ಕಂಪ್ಯೂಟರ್‍ನಿಂದ ಪಡೆದ ಪ್ರತಿ.

 



ಮಾಹಿತಿ ಹಕ್ಕು ಅಧಿನಿಯಮದ ಹಿನ್ನೆಲೆ:


            ಬ್ರಿಟೀಷ್ ಸರ್ಕಾರದ ಸಮಯದಲ್ಲಿ ಸರ್ಕಾರಕ್ಕೆ ಸಂಬಂದಿತ ಗೌಪ್ಯತೆಯ ದಾಖಲೆಗಳನ್ನು ಅಧೀಕೃತವಾಗಿ ಬಹಿರಂಗ ಪಡಿಸುವ ಸರ್ಕಾರಿ ನೌಕರರ ಗೌಪ್ಯತೆ ಕಾಯ್ದೆ 1889 ಈ  ರೀತಿಯ ದಾಖಲೆಗಳನ್ನು ಬಹಿರಂಗ ಪಡಿಸುತ್ತಿದ್ದು. 1923 ರಲ್ಲಿ ಈ ಆಕ್ಟ್   ಅಧೀಕೃತವಾಗಿ ತಿದ್ದುಪಡಿ ಒಳಪಟ್ಟಿದ್ದು. ಈ ಕಾನೂನಿನ ಪ್ರಕಾರ ಇದು ದಾಖಲೆಗಳನ್ನುಇದು ರಾಜ್ಯದ ಭದ್ರತೆಗೆ ಸಂಬಂದಿತ ದೇಶದ ಐಕ್ಯತೆಗೆ ಧಕ್ಕೆ ತರುವಂತ ವಿದೇಶಗಳೊಂದಿಗೆ ಹೊಂದಿರುವ ಸಂಬಂದಗಳ ಕುರಿತು ದಾಖಲೆಗಳನ್ನು ನೀಡದಿರುವ ಬಗ್ಗೆ ತಿದ್ದುಪಡಿ ಮಾಡಲಾಯಿತು. ನಾಗರೀಕ ಸೇವಾ ನಿಯಮಗಳು ಮತ್ತು ಭಾರತದ ಸಾಕ್ಷ್ಯ ಅಧಿನಿಯಮದ ಕೆಲವೊಂದು ನಿಬಂಧನೆಗಳನ್ನು ಸರ್ಕಾರದ ಅಧಿಕೃತ ಅಧಿಕಾರಿಗಳು ಮತ್ತು ಅಧಿಕಾರಿಗಳಿಗೆ ಈ ರೀತಿಯ ದಾಖಲೆಗಳನ್ನು ಸಾರ್ವಜನಿಕರಿಗೆ ನೀಡದಿರುವಂತೆ ನಿರ್ಭಂದಿಸಲಾಯಿತು.

 



ರಾಜ್ಯವಾರು ಕಾಯ್ದೆಗಳು :


          ಮಾಹಿತಿ ಹಕ್ಕು ಅದಿನಿಯಮ ತಮಿಳುನಾಡು 1997, ಗೋವಾ 1997,ರಾಜಸ್ಥಾನ 2000, ಕರ್ನಾಟಕ 2000, ದೆಹಲಿ 2001 , ಮಹಾರಾಷ್ಟ್ರ -2002,ಮದ್ಯಪ್ರದೇಶ -2003, ಅಸ್ಸಾಂ -2002, ಜಮ್ಮು ಮತ್ತು ಕಾಶ್ಮೀರ್ 2004, ರಾಜ್ಯಗಳಲ್ಲಿ ಜಾರಿಗೊಂಡಿತ್ತು. ಮಹಾರಾಷ್ಟ್ರ ಮತ್ತು ದೆಹಲಿ ರಾಜ್ಯದಲ್ಲಿ ಈ ನಿಯಮವು ಹೆಚ್ಚಿನದಾಗಿ ಬಳಸಲಾಗುತ್ತಿದೆ.ದೆಹಲಿಯಲ್ಲಿ ಈ ಅಧಿನಿಯಮದ ಬಳಕೆ ಇನ್ನೂ ಮುಂಚೂಣಿಯಲ್ಲಿದೆ. ಜಮ್ಮು ಮತ್ತು ಕಾಶ್ಮೀರವು ತನ್ನದೇ ಅದ ಮಾಹಿತಿ ಹಕ್ಕು ಅಧಿನಿಯಮ-2009 ಒಳಗೊಂಡಿದ್ದು.ಇದು 2004 ಮತ್ತು 2008 ರಲ್ಲಿ ತಿದ್ದು ಪಡಿಯಾಗಿದೆ.

 



ಮಾಹಿತಿ ಹಕ್ಕು ಅಧಿನಿಯಮದ ಸ್ವಾತಂತ್ರತೆ:


            ರಾಜ್ಯ ಮಟ್ಟದಲ್ಲಿ ಅಧಿಕೃತವಾದ ನಿಯಮವನ್ನು ರೂಪಿಸಿ ಅದನ್ನುಎಲ್ಲಾ ರಾಜ್ಯಗಳಲ್ಲಿ ಅಳವಡಿಸುವುದು ಒಂದು ಕಠಿಣವಾದ ಕಾರ್ಯ ಹೆಚ್.ಡಿ. ಶೌರಿಇವರ ನಾಯಕತ್ವದಲ್ಲಿ ಕೇಂದ್ರ ಸರ್ಕಾರವು  ಎಲ್ಲಾ ರಾಜ್ಯಗಳಿಗೆ ಅನ್ವಯವಾಗುವಂತಹ ನಿಯಮ ರೂಪಿಸಲು ಕರುಡು ಸಮಿತಿಯನ್ನು ರಚಿಸಲಾಯಿತು.ಶೌರಿಯವರು ಸಿದ್ದಪಡಿಸಿದ ಕರುಡು ಪ್ರತಿಯನ್ನು ಅಧಾರಿಸಿ ಪ್ರೀಢಮ್‍ ಅಫ್‍ ಇನ್‍ಫಾರ್‍ಮೇಷನ್ ಬಿಲ್ 2002, ಎಂಬ ಕಾನೂನನ್ನು ಉಚಿತ ಮಾಹಿತಿ ಅಧಿನಿಯಮದಲ್ಲಿ ಜಾರಿಗೊಳಿಸಲಾಯಿತು. ಈ ಬಿಲ್ ಹೆಚ್ಚಿನ ದುರ್ಬಲತೆಯನ್ನು ಒಳಗೊಂಡಿದ್ದು. ತುಂಬಾ ವಿಮರ್ಷೆಗೆ ಒಳಗೊಂಡಿತು.ಈ ಅಧಿನಿಯಮ ಹೆಚ್ಚಿನ ವಿನಾಯಿತಿಗಳನ್ನು ಒಳಗೊಂಡಿದ್ದು. ಸಾರ್ವಜನಿಕ ಹಿತಾಸಕ್ತಿಗೆ ಸಂಬಂದ ಪಡುವ ವಿಷಯಗಳನ್ನು ದುರ್ಬಲಗೊಳಿಸಲಾಯಿತು. ನಂತರ ದಿನಗಳಲ್ಲಿ ಉಚಿತ ಮಾಹಿತಿ ಅಧಿನಿಯಮ ಪರಿಣಾಮಕಾರಿಯಾಗಿ ಜಾರಿಗೊಳ್ಳಲಿಲ್ಲ.

 


ಶಾಸನಕ್ಕಾಗಿ :


            ಉಚಿತ ಮಾಹಿತಿ ಅಧಿನಿಯಮ, ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಮಾಹಿತಿ ಹಕ್ಕು ಅಧಿನಿಯಮ ಸೃಷ್ಠಿಗೆ ಕಾರಣವಾಯಿತು ಇದರ ಮೊದಲ ಕರುಡು ಪ್ರತಿಯನ್ನು ಚರ್ಚೆಗೆ ಒಳಪಡಿಸಲಾಯಿತು. ನಂತರ ದಿನಗಳಲ್ಲಿ (ಡಿಸೆಂಬರ್2004 ರಿಂದ 15 ಜೂನ್ 2005 ರ ಒಳಗೆ) ನೂರಾರು ತಿದ್ದುಪಡಿಗಳೊಂದಿಗೆ  ಮಾಹಿತಿ ಹಕ್ಕು ಅಧಿನಿಯಮ 13 ಆಕ್ಟೋಬರ್ 2005 ರಲ್ಲಿಜಾರಿಗೊಂಡಿತು.
ಈ ಅಧಿನಿಯಮ ಕಾಶ್ಮೀರವನ್ನು ಹೊರತು ಪಡಿಸಿ ದೇಶದ ಎಲ್ಲೇಡೆ ಕಾರ್ಯಗತಗೊಳ್ಳುತಿದೆ. ಇದು ರಾಷ್ಟ್ರದ ಸಂವಿಧಾನಾತ್ಮಕವಾದ ಅಧಿಕಾರಗಳಾದ ಕಾರ್ಯಾಂಗ, ನ್ಯಾಯಾಂಗ,  ಮತ್ತು ಶಾಸಕಾಂಗಳಿಗೆ ಅನ್ವಯವಾಗುತ್ತಿದೆ.  ಸಂವಿಧಾನದಿಂದ ರಚಿತವಾದ ಅಥವಾ ಸಂವಿಧಾನಕ್ಕೆ ಸಂಬಂದಿಸಿದ ಎಲ್ಲಾ ಸಂಸ್ಥೆಗಳನ್ನು ಒಳಗೊಂಡಿದೆ ಅಲ್ಲದೇ ಸರ್ಕಾರದಿಂದ ಅಧಿಕೃತವಾಗಿ ಅಥವಾ ಮೇಲೆ ಸೂಚಿಸಿದ ಸಂಸ್ಥೆಗಳಿಂದ ನಿಯಂತ್ರಣಗೊಂಡಿದ್ದಲ್ಲಿ ಅಥವಾ ಹಣಕಾಸಿಗೆ ಸಂಬಂಧಿತವಾಗಿದ್ದಲ್ಲಿ ಸರ್ಕಾರಿ ,ಅರೆ ಸರ್ಕಾರಿ ಸಂಸ್ಥೆಗಳು, ಸರ್ಕಾರಿಂದ ಹಣ ಸಹಾಯ ಪಡೆದ ಸರ್ಕಾರೇತರ ಸಂಸ್ಥೆಗಳು ಈ ಅಧಿನಿಯಮಕ್ಕೆ ಒಳಪಡುತ್ತದೆ. ಖಾಸಗಿ ಸಂಸ್ಥೆಗಳು ಇದಕ್ಕೆ ನೇರವಾಗಿ ಒಳಪಡುವುದಿಲ್ಲ.

            ಮಾಹಿತಿ ಈ ಅಧಿನಿಯಮವು ಪ್ರತಿಒಬ್ಬ ನಾಗರೀಕನಿಗೂ ಮಾಹಿತಿಯನ್ನು ನಿಗದಿತ ರೀತಿಯಲ್ಲಿ ಕೋರಲು ದಾಖಲೆಗಳ ಪ್ರತಿ ಪಡೆಯಲು ದಾಖಲೆಗಳನ್ನು ಕೆಲಸಗಳನ್ನು  ಮತ್ತು ವರದಿಗಳನ್ನು ಪರೀಕ್ಷಿಸಲು ಕೆಲಸದ ಮಾದರಿಗಳ ಪ್ರತಿಯನ್ನು ಪಡೆಯಲು ಮತ್ತು ಮಾಹಿತಿಯನ್ನು ಎಲೆಕ್ಟ್ರಾನಿಕ್‍ ರೀತಿಯಲ್ಲಿ ಪಡೆಯಲು ಅಧಿಕಾರ ಉಳ್ಳವನಾಗಿರುತ್ತಾನೆ.


 

ಮಾಹಿತಿಯನ್ನು ಪಡೆಯುವ ವಿಧಾನ:


1.ಮೊದಲನೇ  ಹಂತದಲ್ಲಿ ಪ್ರತಿಯೊಂದು ಸಾರ್ವಜನಿಕ ಸಂಸ್ಥೆಯು ನಿಗದಿಗೊಳಿಸಿದ ಮಾಹಿತಿಯನ್ನು ನೀಡಲು
ನಿಗದಿಗೊಳಿಸಿದ ಅಧಿಕಾರಿಯನ್ನು ಹೊಂದಿರುತ್ತಾರೆ.


2. ಎರಡನೇ ಹಂತದಲ್ಲಿ ಈ ಮಾಹಿತಿ ಹಕ್ಕು ಅಧಿಕಾರಿಯೂ ತನ್ನ ಹೆಚ್ಚಿನ ದರ್ಜೆಯ ಅಧಿಕಾರಿಯನ್ನು ಮೇಲ್ಮನವಿಯ ಅಧಿಕಾರಿಯಾಗಿ ನಿಗದಿಗೊಳಿಸಲಾಗಿರುತ್ತದೆ. ಇವರಲ್ಲಿ ನಾಗರೀಕರು ತಾವು ಮೊದಲ ಹಂತದಲ್ಲಿ ಪಡೆದ ಮಾಹಿತಿಯೂ ಸಮರ್ಪಕವಾಗದೇ ಇದ್ದಲ್ಲಿ ನಿರಾಕರಿಸಲ್ಪಟ್ಟಲ್ಲಿ ಇವರಿಗೆ ಸಲ್ಲಿಸಬಹುದಾಗಿರುತ್ತದೆ.


3. ಮೂರನೇ ಹಂತದಲ್ಲಿ ಸ್ವಾತಂತ್ರ್ಯಯುತವಾದಕೇಂದ್ರ/ ರಾಜ್ಯ ಮಾಹಿತಿ ಹಕ್ಕು ಆಯೋಗ ರಚಿಸಲ್ಪಟ್ಟಿದ್ದು.ಅಲ್ಲಿ ನಾಗರೀಕರು ಅಸಮರ್ಪಕ ಮಾಹಿತಿ ಕುರಿತು ಮನವಿ ಸಲ್ಲಿಸಬಹುದಾಗಿರುತ್ತದೆ.  ಆಯೋಗವು ಮಾಹಿತಿ ಹಕ್ಕು ಅಧಿಕಾರಿಗಳನ್ನು ನಿಯಮಿಸುವುದು. ಆಯೋಗವು ನಿಗದಿಪಡಿಸಿದ ಈ ಅಧಿಕಾರಿಗಳು ಮತ್ತು ಸಹಾಯಕ ಅಧಿಕಾರಿಗಳು ನಿಗಧಿಗೊಳಿಸಿದ ನೂರು ದಿನಗಳ ಒಳಗೆ ಮಾಹಿತಿಯನ್ನು ನೀಡಬೇಕಾಗಿರುತ್ತದೆ. ಈ ಅಧಿಕಾರಿಗಳು ನಾಗರೀಕರಿಂದ  ಮಾಹಿತಿಕೋರಿ ಮನವಿ ಸ್ವೀಕರಿಸುವುದಲ್ಲಾದೆ, ಮಾಹಿತಿಯನ್ನು ಹುಡುಕಲು ಸಹಾಯಕವಾಗಿ ಕಾರ್ಯ ನಿರ್ವಹಿಸ ಬೇಕಾಗಿರುತ್ತದೆ.

ಇತ್ತೀಚಿನ ನವೀಕರಣ​ : 07-07-2021 01:02 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಬೆಂಗಳೂರು ಗ್ರಾಮಾಂತರ ಜಿಲ್ಲೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080