ಅಭಿಪ್ರಾಯ / ಸಲಹೆಗಳು

ಇತಿಹಾಸ

 

ಬೆಂಗಳೂರು ಗ್ರಾಮಾಂತರ ಜಿಲ್ಲೆ ಕರ್ನಾಟಕದ 31 ಜಿಲ್ಲೆಗಳಲ್ಲಿ ಒಂದಾಗಿದೆ. ಬೆಂಗಳೂರು (ಗ್ರಾಮಾಂತರ) ಮತ್ತು ಬೆಂಗಳೂರು (ನಗರ) ಎಂದು ವಿಭಜಿಸಲ್ಪಟ್ಟಾಗ 1986 ರಲ್ಲಿ ಇದನ್ನು ಸ್ಥಾಪಿಸಲಾಯಿತು.  

           2007 ನೇ ಸಾಲಿನಲ್ಲಿ  ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ರಾಮನಗರ ಜಿಲ್ಲೆಯು ವಿಭಜನೆಗೊಂಡು ರಾಮನಗರವನ್ನು ಜಿಲ್ಲಾ ಕೇಂದ್ರವನ್ನಾಗಿಸಿ, ಚನ್ನಪಟ್ಟಣ, ಕನಕಪುರ ಮತ್ತು ಮಾಗಡಿ ತಾಲ್ಲೂಕು ಗಳೊಂದಿಗೆ ಮರು ನಿರ್ಮಾಣ ಮಾಡಲಾಯಿತು. 

                ಪ್ರಸ್ತುತ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ, 1 ವಿಭಾಗ, 4 ತಾಲ್ಲೂಕುಗಳು, 17 ಹೋಬಳಿಗಳು, 952 ವಾಸಯೋಗ್ಯ ಮತ್ತು 131 ಜನನಿಬಿಡ ಗ್ರಾಮಗಳು, 105 ಗ್ರಾಮ ಪಂಚಾಯತಿಗಳಿವೆ. ಬೆಂಗಳೂರು ನಗರಕ್ಕೆ ಸಾಮೀಪ್ಯವು ಜಿಲ್ಲೆಯ ಮೇಲೆ ತನ್ನದೇ ಆದ ಪ್ರಭಾವವನ್ನು ಹೊಂದಿದೆ, ಗಣನೀಯ ಪ್ರಮಾಣದ ದಿನನಿತ್ಯದ ಜನಸಂಖ್ಯೆಯನ್ನು ಹೊಂದಿದೆ. ಗ್ರಾಮೀಣ ಜನರು ಹೆಚ್ಚಾಗಿ ಕೃಷಿಕರಾಗಿದ್ದಾರೆ, ಆದರೂ ಪ್ರದೇಶ, ಸೇವಾ ಮತ್ತು ಐಟಿ ಉದ್ಯಮಗಳು SEZ ಗಳ ಆಗಮನದಿಂದ ಹೆಚ್ಚಾಗುತ್ತಿದೆ. ದೇವನಹಳ್ಳಿ ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪವಿರುವ 95 ಬಿಲಿಯನ್ ದೇವನಹಳ್ಳಿ ಉದ್ಯಮ ಉದ್ಯಾನವನವಾಗಿದೆ. 2011 ರ ಜನಗಣತಿಯ ಪ್ರಕಾರ, ಜಿಲ್ಲೆಯ ಒಟ್ಟು ಜನಸಂಖ್ಯೆ 9,90,923 ಆಗಿದೆ, ಇದರಲ್ಲಿ 21.65% ರಷ್ಟು ನಗರವು ಜನಸಂಖ್ಯೆ ಸಾಂದ್ರತೆ ಪ್ರತಿ ಕಿ.ಮಿ 2 ಗೆ 309 ವ್ಯಕ್ತಿಗಳು. ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಶೇಕಡಾವಾರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 22.5% ಜನಸಂಖ್ಯೆಯನ್ನು ಹೊಂದಿದೆ. ಹಿಂದೂ ಧರ್ಮವು ಈ ಜಿಲ್ಲೆಯ ಪ್ರಮುಖ ಧರ್ಮವಾಗಿದೆ. 

                ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಮುಖ್ಯವಾಗಿ ಒಂದು ಕೃಷಿ ಜಿಲ್ಲೆಯಾಗಿದ್ದು, ಕೈಗಾರೀಕರಣ, ಡೈರಿ ಅಭಿವೃದ್ಧಿ ಮತ್ತು ರೇಷ್ಮೆ ಕೃಷಿಗೆ ಸಾಕಷ್ಟು ವ್ಯಾಪ್ತಿ ಹೊಂದಿದೆ. ಜಿಲ್ಲೆಯಲ್ಲಿ ಕೃಷಿ ಮತ್ತು ತೋಟಗಾರಿಕಾ ಬೆಳೆಗಳಾದ ರೇಷ್ಮೆ, ಭತ್ತ, ಕಡಲೆಕಾಯಿ, ಕಬ್ಬು, ದ್ರಾಕ್ಷಿಗಳು, ಹಿಪ್ಪುನೇರಳೆ ಮುಂತಾದವುಗಳು ಸೇರಿವೆ. ಸಾರಿಗೆ ಮತ್ತು ಸಂವಹನ, ಬ್ಯಾಂಕಿಂಗ್, ಸಾಲ ಮತ್ತು ಮಾರುಕಟ್ಟೆ ಮುಂತಾದ ಸಾಕಷ್ಟು ಮೂಲಸೌಕರ್ಯ ಸೌಲಭ್ಯಗಳಿವೆ. ಈ ಪ್ರದೇಶವು ಖನಿಜ ಸಂಪನ್ಮೂಲಗಳಲ್ಲಿ ಶ್ರೀಮಂತವಾಗಿಲ್ಲದಿದ್ದರೂ, ಅದರ ಲೋಹೀಯ ಖನಿಜ ಸಂಪನ್ಮೂಲಗಳನ್ನು ಇಟ್ಟಿಗೆಗಳು, ಹೆಂಚುಗಳು ಮತ್ತು ಜೇಡಿಪಾತ್ರೆಗಳಿಗೆ ಬಳಸಿಕೊಳ್ಳಲಾಗುತ್ತದೆ. ಹಲವು ವರ್ಷಗಳವರೆಗೆ, ನೇಯ್ಗೆ ಕೂಡ ಜನಸಂಖ್ಯೆಯ ದೊಡ್ಡ ಭಾಗಕ್ಕೆ ಪ್ರಮುಖ ಉದ್ಯೋಗವಾಗಿದೆ. ಮಣ್ಣು ಮತ್ತು ಹವಾಮಾನದ ಪರಿಸ್ಥಿತಿಗಳು ಹಿಪ್ಪು ನೇರಳೆ, ಕೃಷಿ, ರೇಷ್ಮೆ ಹುಳುಗಳನ್ನು ಬೆಳೆಸುವುದು, ಮತ್ತು ರೇಷ್ಮೆ ಉತ್ಪಾದನೆ, ಇತರ ಕೃಷಿ-ಆಧಾರಿತ ಕೈಗಾರಿಕೆಗಳಿಗೆ ಸಮಂಜಸವಾಗಿದೆ. 


ಬೆಂಗಳೂರು ಜಿಲ್ಲೆಯು ಸಮುದ್ರ ಮಟ್ಟದಿಂದ ಸರಾಸರಿ 629 ರಿಂದ 950 ಮ್ಭಿಟರ್ ಎತ್ತರದಲ್ಲಿದೆ.  ಬೆಂಗಳೂರು ಗ್ರಾಮಾಂತರ ಜಿಲ್ಲೆಯು

04 ತಾಲ್ಲೂಕುಗಳನ್ನು ಒಳಗೊಂಡಿದೆ.

ದೇವನಹಳ್ಳಿ
ದೊಡ್ಡಬಳ್ಳಾಪುರ
ಹೊಸಕೋಟೆ
ನೆಲಮಂಗಲ

ಕೃಷಿ ಭೂಮಿ :

               ಮಳೆಯಾಧಾರಿತ ಮತ್ತು ಒಣ ಬೇಸಾಯವು ಜಿಲ್ಲೆಯ ಕೃಷಿಯ ಮುಖ್ಯ ಲಕ್ಷಣವಾಗಿದೆ.  ರಾಗಿ ಬೆಳೆಯು ಜಿಲಲೆಯ ಮುಖ್ಯ ಬೆಳೆಯಾಗಿದ್ದು ಅತಿ ಹೆಚ್ಚು ರಾಗಿಯನ್ನು ಬೆಳೆಯುತ್ತಾರೆ.  ಇತ್ತೀಚಿನ ದಿನಗಳಲ್ಲಿ ರೇಷ್ಮೆ ಕೃಷಿಯು ಗಮನಾರ್ಹವಾಗಿ ಹೆಚ್ಚಳವಾಗಿದೆ.  ಜಿಲ್ಲೆಯ ಹವಾಮಾನವು ಆಹ್ಲಾದಕರವಾಗಿದ್ದು ವಿಪರೀತ ಏರಿಳಿತಗಳನ್ನು ಹೊಂದಿಲ್ಲ.  ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕಡಿಮೆಯಿದ್ದು, ಯಾವುದೇ ಪ್ರಮುಖ ನದಿಗಳನ್ನು ಹೊಂದಿಲ್ಲ, ಹೀಗಾಗಿ ನೀರಾವರಿ ಸೌಲಭ್ಯಗಳು ಅಷ್ಟು ಉತ್ತಮವಾಗಿಲ್ಲ.  ಈ ಜಿಲ್ಲೆಯು ಸಹ ಅತೀವೃಷ್ಠಿ ಮತ್ತು ಅನಾವೃಷ್ಠಿಗಳಿಂದ ಬೆಳ ನಷ್ಟವನ್ನು ಅನುಭವಿಸುತ್ತಿದೆ.  ತೋಟಗಾರಿಕೆಯು ಜಿಲ್ಲೆಯ ಆರ್ಥಿಕತೆಗೆ ಗಣನೀಯ ಪ್ರಮಾಣದ ಕೊಡುಗೆಯ್ನು ನೀಡಿದೆ.  ತೋಟಗಾರಿಕೆ ಬೆಳೆಗಳಾದ ದ್ರಾಕ್ಷಿ, ಮಾವು ಹಾಗೂ ತರಕಾರಿಗಳನ್ನು ಬಹುಪಾಲು ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ.  ಬೀಟೆಲ್ ದ್ರಾಕ್ಷಿ ತೋಟಗಳನ್ನು ಅನೇಕ ಕಡೆ ಕಾಣಬಹುದು.  ಜಿಲ್ಲೆಯು ಕೃಷಿಯೊಂದಿಗೆ ಪಳುಸಂಗೋಪನೆಯ ಜಿಲ್ಲೆಯ ರೈತರ ಮುಖ್ಯ ಕಸುಬಾಗಿದೆ.  ಬೆಂಗಳೂರು ನಗರದ ಕ್ಷಿಪ್ರ ಪ್ರಗತಿಯಿಂದ ಜಿಲ್ಲೆಯಲ್ಲಿ ಪಶುಸಂಗೋಪನೆ, ಕುಕ್ಕುಟ ಉದ್ಯಮ, ಹಣ್ಣು ತೋಟಗಾರಿಕೆಯು ಆರ್ಥಿಕ ಪ್ರಾಮುಖ್ಯತೆಯನ್ನು ಹೆಚ್ಚಿಸಿದೆ.  ಈ ಉದ್ಯಮವು ಬಹಳ ದೊಡ್ಡ ಮಟ್ಟದಲ್ಲಿ ಉದ್ಯೋಗವನ್ನು ಒದಗಿಸುತ್ತಿದೆ.  ಉಣ್ಣೆ ಹಾಗೂ ಮಾಂಸಕ್ಕಾಗಿ ಕುರಿಸಾಕಾಣೆಯನ್ನು ಗಣನೀಯ ಪ್ರಮಾಣದಲ್ಲಿ ಮಾಡಲಾಗುತ್ತಿದೆ.  ವಿಜಯಪುರವು ರೇಷ್ಮೆ ಬೆಳೆಯ ಪ್ರಮುಖ ಕೇಂದ್ರವಾಗಿದ್ದು, ರೇಷ್ಮೆ ಮಾರಕಟ್ಟೆಯನ್ನು ಹೊಂದಿದೆ.  ದೊಡ್ಡಬಳ್ಳಾಪುರ ಮತ್ತು ದೇವನಹಳ್ಳಿಗಳು ನೇಯ್ಗೆ ಉದ್ಯಮಕ್ಕೆ ಪ್ರಸಿದ್ದಯಾಗಿವೆ.  ಬೀಡಿ ಕಟ್ಟುವುದು ಹಾಗೂ ಅಗರಬತ್ತಿ ನೇಯುವುದು ಮಹಿಳೆಯರ ಪ್ರಮುಖ ಗುಡಿ ಕೈಗಾರಿಕೆಯಾಗಿದೆ.
 

ಹೆಸರಿನ ಮೂಲ :

              ಬೆಂಗಳೂರು ಜಿಲ್ಲೆಯು ತನ್ನ ಹೆಸರನ್ನು ಮಾತೃ ಜಿಲ್ಲೆಯಾದ ಬೆಂಗಳೂರು ನಗರದಿಂದ ಪಡೆದುಕೊಂಡಿದೆ.  ಜಿಲ್ಲೆಯ ಬಹುಪಾಲು ಭಾಗವು ಗ್ರಾಮೀಣ ಪ್ರದೇಶದಿಂದ ಕೂಡಿದೆ.  ಬೆಂಗಳೂರು ಹೆಸರಿನ ಮೂಲ ಉಲ್ಲೇಖವನ್ನು ಮೊಟ್ಟ ಮೊದಲನೆಯದಾಗಿ 9ನೇ ಶತಮಾನದ ಗಂಗರ ಶಾಸನದಲ್ಲಿ ‘ಬೆಂಗುಲುರು’ ಎಂದು ಉಲ್ಲೇಖವಾಗಿದೆ.  ಬೆಂಗಳೂರು ಹೆಸರಿನ ಮೂಲವನ್ನು ಸೂಚಿಸುವ ಮತ್ತೊಂದು ಜನಪ್ರಿಯ ಕಥೆಯೆಂದರೆ ಹೋಯ್ಸಳ ರಾಜ ಬಲ್ಲಾಳನು ತನ್ನ ಸುದೀರ್ಘ ಪ್ರಯಾಣದ ಸಂದರ್ಭದಲ್ಲಿ, ಒಬ್ಬ ವೃದ್ದೆಯು ಈತನಿಗೆ ‘ಬೆಂದ ಕಾಳು”ಗಳನ್ನು ಆಹಾರವಾಗಿ ನೀಡಿದ್ದರಿಂದ ಹೋಯ್ಸಳ ದೊರೆ ಬಲ್ಲಾಳಲು ‘ಬೆಂದಕಾಳೂರು’ ಎಂದು ನಾಮಕರಣ ಮಾಡಿದನು ಎಂದು ಹೇಳಲಾಗುತ್ತದೆ.  ಈ ಜಿಲ್ಲೆಯು ಕರ್ನಾಟಕ ದಕ್ಷಿಣ ಭಾಗದ ಬಯಲು ಸೀಮೆಯ ಪ್ರದೇಶದಲ್ಲಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಉತ್ತರದಲ್ಲಿ ತುಮಕೂರು ಮತ್ತು ಕೋಲಾರ ಜಿಲ್ಲೆಯನ್ನು, ದಕ್ಷಿಣದಲ್ಲಿ ರಾಮನಗರ ಮತ್ತು ಪೂರ್ವದಲ್ಲಿ ಕೋಲಾರ ಮತ್ತು ತಮಿಳುನಾಡಿನಿಂದ ಸುತ್ತುವರಿದ್ದು, ಬೆಂಗಳೂರು ನಗರ ಜಿಲ್ಲೆಯನ್ನು ಮೂರು ದಿಕ್ಕುಗಳಿಂದ ಸುತ್ತುವರಿದಿದೆ.

 


ಪ್ರದೇಶ ಮತ್ತು ಜನಸಂಖ್ಯೆ :


           ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಭೌಗೋಳಿಕವಾಗಿ 2259 ಚ.ಕಿ.ಮೀ ಪ್ರದೇಶವನ್ನು ಹೊಂದಿದ್ದು, 9,87,257 ಜನಸಂಖ್ಯೆಯನ್ನು ಹೊಂದಿದೆ.  441/ಚ.ಕಿ.ಮೀ ಜನಸಾಂದ್ರತೆಯನ್ನು ಹಾಗೂ 945 ಲಿಂಗಾನುಪಾತವನ್ನು ಹೊಂದಿದೆ.
 

ಆಡಳಿತಾತ್ಮಕವಾಗಿ ಜಿಲ್ಲೆಯ ಇತಿಹಾಸ :

           ಐತಿಹಾಸಿಕವಾಗಿ ಈ ಜಿಲ್ಲೆಯನ್ನು ಆಳಿದ ಪ್ರಥಮ ಮನೆತನವೆಂದರೆ ಗಂಗರು. ಸುಮಾರು ಕಿ.ಶ 4ನೇ ಶತಮಾನದಲ್ಲಿ ಕೋಲಾರದಲ್ಲಿ ಸ್ಥಾಪನೆಯಾಯಿತು.  ಈ ಸಾಮ್ರಾಜ್ಯವು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗಂಗವಾಡಿವರೆಗೆ ಗಡಿಯನ್ನು ಹೊಂದಿದ್ದು, ಚನ್ನಪಟ್ಟಣ ತಾಲ್ಲೂಕಿನ ಹೊಂಗನೂರು ಈ ಉಪವಿಭಾಗದ ಮುಖ್ಯ  ಪಟ್ಟಣವಾಗಿತ್ತು.   ಇದು ಶಿಂಶಾ ನದಿ ಕಣೆವೆ ಪ್ರದೇಶವನ್ನು ಒಳಗೊಂಡಿತ್ತು.  7ನೇ ಶತಮಾನದಲ್ಲಿ ಮಾಕುಂದವು ಪ್ರಾಮುಖ್ಯತೆ ಹೊಂದಿದ ಸ್ಥಳವಾಗಿತ್ತು.  ಕಾರಣ ಗಂಗರ ದೊರೆ ಭುವಿಕರ್ಮ (654-74) ಮತ್ತು ಶಿವಕುಮಾರ(679-726) ರ 2ನೇ ರಾಜಧಾನಿಯಾಗಿತ್ತು.  8ನೇ ಶತಮಾನದಲ್ಲಿ ಶ್ರೀಪುರುಷನು ಮಾನ್ಯಪುರವನ್ನು (ನೆಲಮಂಗಲ ತಾಲ್ಲೂಕಿನ ಮಣ್ಣೆ) ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡನು ನಂತರ ರಾಷ್ಟ್ರಕೂಟರ ಕಾಲದಲ್ಲಿ ಮುಖ್ಯ ವ್ಯಾಪಾರ ಕೇಂದ್ರವಾಗಿತ್ತು.  ತಮಿಳಿನ ದಾಖಲೆಗಳ ಪ್ರಕಾರ ಮಣ್ಣೆ ಅಥವಾ ಮನ್ನೆ ಕರಡತಂ ರಾಷ್ಟ್ರಕೂಟರ ರಾಜ್ಯಪಾಲ ಕಂಬರಸನ ಕೇಂದ್ರ ಸ್ಥಾನವಾಗಿತ್ತು ಎಂದು ತಿಳಿದು ಬರುತ್ತದೆ. ಜಿಲ್ಲೆಯ ಕೆಲವು ಭಾಗಗಳು ಮುಖ್ಯವಾಗಿ ಪೂರ್ವದ ಭಾಗಗಳು ಪಲ್ಲವರ ಆಳ್ವಿಕೆಗೆ ಒಳಪಟ್ಟದ್ದವು.
 

ನದಿಗಳು :


   ಬೆಂಗಳೂರು ಜಿಲ್ಲೆಯ ಪ್ರಮುಖ ಭಾಗವು ಅರ್ಕಾವತಿ ನದೆ ಕಣಿವೆಯಲ್ಲಿದೆ.  ಅರ್ಕಾವತಿ, ಕಣ್ವ ಮತ್ತು

   ದಕ್ಷಿಣ ಪಿನಾಕಿನಿ (ದಕ್ಷಿಣ ಪೆನ್ನಾರ್) ನದಿಗಳು ಸಾಮಾನ್ಯವಾಗಿ ಬೆಂಗಳೂರು ಜಿಲ್ಲೆಯ ಉತ್ತರದಿಂದ ದಕ್ಷಿಣ ದಿಕ್ಕಿಗೆ ಹರಿಯುತ್ತವೆ.

ಇತ್ತೀಚಿನ ನವೀಕರಣ​ : 19-03-2021 11:43 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಬೆಂಗಳೂರು ಗ್ರಾಮಾಂತರ ಜಿಲ್ಲೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080